ಡಾ. ಕೆ.ಎನ್. ಗಣೇಶಯ್ಯನವರು ಒಬ್ಬ ಕ್ಕೃಷಿ ವಿಜ್ಞಾನಿ ಮತ್ತು ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು. ಮೂಲತಃ ಕೋಲಾರ ಜಿಲ್ಲೆಯವರು. ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್ ಹಾಗೂ ಪ್ರಧಾನ ವಿಜ್ಞಾನಿಯಾಗಿದ್ದಾರೆ. ಇತಿಹಾಸ ಮತ್ತು ವೈಜ್ಞಾನಿಕ ವಿಷಯಗಳನ್ನೊಳಗೊಂಡ ರೋಚಕ ಕಥೆಗಳನ್ನು ಒಂದು ವಿಭಿನ್ನ ಶೈಲಿಯಲ್ಲಿ ಬರೆಯುವ ಮೂಲಕ ಕನ್ನಡದಲ್ಲಿ ಒಂದು ಹೊಸ ಬಗೆಯ ಸಾಹಿತ್ಯವನ್ನು ತಂದವರೆಂದು ಪ್ರಸಿದ್ಧಿಯಾಗಿದ್ದಾರೆ. == ವೃತ್ತಿ-ಪ್ರವೃತ್ತಿ == ಇವರು ಪರಿಸರ ಮತ್ತು ಜೀವವೈವಿಧ್ಯತೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಹಲವು ವಿಜ್ಞಾನ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇತಿಹಾಸದ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಜಗತ್ತಿನ ವಿಜ್ಞಾನಿಗಳಲ್ಲಿ ಚಿರಪರಿಚಿತರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ. ಜೀವವೈವಿಧ್ಯದ ಸಂರಕ್ಷಣೆಯ ಸಂಶೋಧನೆಯಲ್ಲಿ ಹಾಗೂ ಭಾರತದ ಜೀವಸಂಪತ್ತಿನ ಮಾಹಿತಿಯನ್ನು ಗಣಕೀಕರಿಸುವ ಪ್ರಮುಖ ಕಾರ್ಯದಲ್ಲಿ ನಿರತರು. ಜೊತೆಗೆ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಸ್ಯ ಮತ್ತು ಕೀಟ ಸಂಪನ್ಮೂಲದ ನಕ್ಷೆಯನ್ನೂ ತಯಾರಿಸುತ್ತಿದ್ದಾರೆ. ಭಾರತದ ಹಲವಾರು ಸಂಘ-ಸಂಸ್ಥೆಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಸಸ್ಯ, ಪ್ರಾಣಿ, ಅಣುಜೀವಿಗಳು, ಸಮುದ್ರದ ಜೀವ ಸಂಪತ್ತು ಇವನ್ನು ಕುರಿತು ಭಾರತ ಸರ್ಕಾರದ ಸಹಯೋಗದೊಂದಿಗೆ ಜೀವಸಂಪದ ಹೆಸರಿನಲ್ಲಿ ಇವರು ರೂಪಿಸಿದ ಸಿ.ಡಿ.ಗಳು ಬಿಡುಗಡೆಯಾಗಿವೆ. ಭಾರತದ ಸಸ್ಯಗಳ ಮೇಲಿನ ಜಾಲತಾಣ ಮತ್ತು ಸಿ.ಡಿ.ಗಳು ಪ್ರಪಂಚದ ವಿಜ್ಞಾನಿಗಳ ಗಮನ ಸೆಳೆದಿವೆ. ಜರ್ಮನಿ, ತೈವಾನ್ ಮುಂತಾದೆಡೆ ವಿಜಿಟಿಂಗ್ ಫ್ರೊಪೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ == ವಿದ್ಯಾರ್ಹತೆ == ..( ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಭಾರತ, ೧೯೮೩ ..(: & ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಭಾರತ, ೧೯೭೯ ..(), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಭಾರತ - ೧೯೭೬ == ಪ್ರಕಟಣೆಗಳು, ಯೋಜನೆಗಳು, ಕೃತಿಗಳು == >200 ವಿಜ್ಞಾನ ಪ್ರಬಂಧಗಳನ್ನು ಮಂಡಿಸಿದ್ದಾರೆ ೧೧ ಪುಸ್ತಕಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ ೪ ಪುಸ್ತಕಗಳನ್ನು ಬರೆದಿದ್ದಾರೆ ೩೮ ಅಧ್ಯಾಯಗಳನ್ನು ಬೇರೆ ಬೇರೆ ಪುಸ್ತಕಗಳಿಗೆ ಬರೆದಿದ್ದಾರೆ 26 ಲೇಖನಗಳನ್ನು ಹಲವು ಸಭೆಗಳಲ್ಲಿ ಮಂಡಿಸಿದ್ದಾರೆ ೧6 ಸಿ.ಡಿ.ಗಳನ್ನು ಹೊರತಂದಿದ್ದಾರೆ == ಕನ್ನಡ ಸಾಹಿತ್ಯ == ಗಣೇಶಯ್ಯನವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುತ್ತಿದ್ದಾರೆ. ಅವರು ಕನ್ನಡದಲ್ಲಿ ಕಾದಂಬರಿಗಳು ಮತ್ತು ಕಥೆಗಳನ್ನು ಬರೆದಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಚಾರಿತ್ರಿಕ ನೀಳ್ಗತೆ 'ಶಾಲಭಂಜಿಕೆ' ಇವರ ಮೊಟ್ಟ ಮೊದಲ ಸೃಜನಾತ್ಮಕ ಬರವಣಿಗೆ. ಅವರ ಸಾಹಿತ್ಯವು ಫಿಕ್ಷನ್ () ಸಾಲಿನಲ್ಲಿ ಬರುತ್ತವೆ. ಅನೇಕ ವಾಸ್ತವಿಕ, ಚಾರಿತ್ರಿಕ ಘಟನೆಗಳನ್ನಾಧರಿಸಿ ತುಸು ಕಲ್ಪನೆ, ಕುತೂಹಲ ಬೆರೆಸಿ ಸರಳ ಭಾಷಾಶೈಲಿಯಲ್ಲಿ ಬರೆಯುವುದು ಇವರ ಸಾಹಿತ್ಯದ ವಿಶೇಷ. ಚರಿತ್ರೆ, ವಿಜ್ಞಾನ, ಜೀವವೈವಿಧ್ಯ ಮತ್ತು ಪರಿಸರದ ಅನೇಕ ಪ್ರಮುಖ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇದುವರೆಗೂ ಹಲವು ಕಾದಂಬರಿಗಳು ಮತ್ತು ಕಥಾಸಂಕಲನಗಳನ್ನು ಬರೆದಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅವರ ಸಣ್ಣಕತೆಗಳು ಪ್ರಕಟವಾಗಿವೆ. ಕನಕ ಮುಸುಕು ಇವರ ಚೊಚ್ಚಲ ಕಾದಂಬರಿ. === ಕಾದಂಬರಿಗಳು === ಕನಕಮುಸುಕು ಕರಿಸಿರಿಯಾನ ಕಪಿಲಿಪಿಸಾರ ಚಿತಾದಂತ ಏಳು ರೊಟ್ಟಿಗಳು (೨೦೧೧) ಮೂಕ ಧಾತು (೨೦೧೨) ಶಿಲಾಕುಲ ವಲಸೆ (೨೦೧೪) ಬಳ್ಳಿಕಾಳ ಬೆಳ್ಳಿ (೨೦೧೭) ರಕ್ತಸಿಕ್ತ ರತ್ನ === ಕಥಾಸಂಕಲನಗಳು === ಶಾಲಭಂಜಿಕೆ ಪದ್ಮಪಾಣಿ ನೇಹಲ ಸಿಗೀರಿಯ (೨೦೧೧) ಕಲ್ದವಸಿ (೨೦೧೩) ಮಿಹಿರಾಕುಲ (೨೦೧೫) ಪೆರಿನಿ ತಾಂಡವ (೨೦೧೬) ಆರ್ಯ ವೀರ್ಯ === ಲೇಖನ ಸಂಗ್ರಹ === ಭಿನ್ನ-ಬಿಂಬ (೨೦೧೫) ಭಿನ್ನೋಟ (೨೦೧೬) ವಿ-ಚಾರಣ (೨೦೧೭) ತಾರು ಮಾರು ಶಾಲಭಂಜಿಕೆ, ಪದ್ಮಪಾಣಿ, ಧರ್ಮಸ್ಥ೦ಭ, ಕಿತ್ತೂರ ನಿರಂಜನಿ, ಮತ್ತು ಸಿಗೀರಿಯ ಕತೆಗಳು ನಾಟಕಗಳಾಗಿ ಪ್ರದರ್ಶಿಸಲ್ಪಟ್ಟಿವೆ. == ಪ್ರಶಸ್ತಿ ಮತ್ತು ಪುರಸ್ಕಾರಗಳು == , , , (1991) , (1997) , , , ( ) , , . (1991). , , . , . (2004) , . 2008 (). . == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಗಣೇಶಯ್ಯನವರ ಸಂಶೋಧನೆಗಳ ಬಗ್ಗೆ ವಿವರಗಳು, , ಕರಿಸಿರಿಯಾನ ಪುಸ್ತಕದ ಬಗ್ಗೆ ಬನ್ನೇರುಘಟ್ಟದಲ್ಲಿ ಚಿಟ್ಟೆ ಉದ್ಯಾನವನ ಸ್ಥಾಪನೆಯಲ್ಲಿ ಗಣೇಶಯ್ಯನವರ ಕೊಡುಗೆ ಬಗ್ಗೆ ಲೇಖನ ’ಏಳು ರೊಟ್ಟಿಗಳು’ ಮತ್ತು ’ಸಿಗೀರಿಯಾ’ ಪುಸ್ತಕ ಬಿಡುಗಡೆ ವರದಿ, ಒನ್ ಇಂಡಿಯಾ, ೦೮ ಆಗಸ್ಟ್ ೨೦೧೧ ಕನ್ನಡದ ಚುಕ್ಕುಬುಕ್ಕು ಅಂತರಜಾಲ ತಾಣದಲ್ಲಿರುವ 'ಮೂಕಧಾತು' ಕಾದಂಬರಿಯ ಅಧ್ಯಾಯ ಚುಕ್ಕುಬುಕ್ಕು ಅಂತರಜಾಲ ತಾಣದಲ್ಲಿರುವ 'ಕಲ್ದವಸಿ' ಕಥಾಸಂಕಲನದ ಪುಟ ಪುಸ್ತಕ ಪರಿಚಯ : ಶಿಲಾಕುಲ ವಲಸೆ - ನಿಲುಮೆ, ೦೫ಜನವರಿ೨೦೧೫ ಧರ್ಮ ಮತ್ತು ವಿಜ್ಞಾನ ಬಗ್ಗೆ ಉಪನ್ಯಾಸ ಟೆಡ್ ಟಾಕ್ (ಬೆಂಗಳೂರು)[೧] ಕ್ರುಷಿ ಮತ್ತು ಪರಿಸರ ಬೈ ೨ ಕಾಫಿ (ಸುವರ್ಣ ನ್ಯೂಸ್)[೨] ಸಾಹಿತ್ಯ ಸಂಜೆ ಬೆಂಗಳೂರು ಲಿಟರರಿ ಫ಼ೆಸ್ಟಿವಲ್ ಜಯಶ್ರೀ ದೇಶಪಾಂಡೆ ಪುಸ್ತಕ ಬಿಡುಗಡೆ ಪೂರ್ಣಚಂದ್ರ ತೇಜಸ್ವಿಯ ಬಗ್ಗೆ ಚರ್ಚೆ-೨ ಚರ್ಚೆ-೨[೩] ಚರ್ಚೆ-೩[೪]